Featured Post

ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು ಚಿತ್ರ: ಸಿಂಹಾದ್ರಿಯ ಸಿಂಹ ಸಾಹಿತ್ಯ: ಎಸ್. ನಾರಾಯಣ್ ಸಂಗೀತ: ದೇವ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ ಕಲ್ಲಾದ...

Tuesday, 25 November 2014


Nannaseya Hoove - Naa Ninna Mareyalare- Lyrics



ಚಿತ್ರ: ನಾ ನಿನ್ನ ಮರೆಯಲಾರೆ 
ನಟರು: ರಾಜ್ ಕುಮಾರ್, ಲಕ್ಷ್ಮಿ
ಹಾಡಿದವರು: ರಾಜ್ ಕುಮಾರ್

ನನ್ನಾಸೆಯ ಹೂವೆ ಬೆಳದಿಂಗಳ ಚೆಲುವೆ 
ಇನ್ನೇತಕೆ ಅಳುವೆ ಏಕಾಂತದಿ ಭಯವೆ 
ನಿನ್ನೊಲವಿಗೆ ಸೋತೆನು ಬಂದೆನು ನಾ

ಈ ಮೌನವೇನು ನಿನ್ನಲ್ಲಿ 
ಈ ಕೋಪವೇಕೆ ನನ್ನಲ್ಲಿ 
ನೀ ದೂರ ಹೋದರೆ ಹೀಗೆ 
ನಾ ತಾಳೆ ಈ ವಿರಹದ ಬೇಗೆ 
ಅಹಹ ಅಹಹ ಆಹಾ.....

ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ 
ಸೇರಿದರೆ ಚಿನ್ನ ನಿನ್ನ 
ಕೆಂಪಾದ ಚೆಂದುಟಿಯ ಆಸೆ 

ನನ್ನಾಸೆಯ.....

ಆಹಾ ....ಲಲಲ......

ಬಾನಲ್ಲಿ ನೀಲಿ ಬೆರೆತಂತೆ 
ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ 
ಇರುವಾಗ ಏಕೆ ಈ ಚಿಂತೆ 

ಕಣ್ಣಲ್ಲಿ ಕಣ್ಣ ನೀ ಬೆರೆಸು  
ಲತೆಯಂತೆ ನನ್ನ ಮೈ ಬಳಸು 
ನೂರೆಂಟು ಸುಂದರ ಕನಸು 
ಆ ನಿಮಿಷ ಬಾಳಿಗೆ ಸೊಗಸು 

ನನ್ನಾಸೆಯ ಹೂವೆ......

No comments:

Post a Comment